ಕೋಳಿ ಅಂಕ ಅಡ್ಡೆಗೆ ಕುಂಬಳೆ ಪೊಲೀಸರ ದಾಳಿ, ಎರಡು ಕೋಳಿ ಸಹಿತ ಇಬ್ಬರ ಸೆರೆ


 ಕುಂಬಳೆ: ಕಯ್ಯಾರಿನಲ್ಲಿ‌ ನಡೆದ ಕೋಳಿ ಅಂಕಕ್ಕೆ ದಾಳಿ‌ ನಡೆಸಿದ ಕುಂಬಳೆ ಪೊಲೀಸರು ಎರಡು ಕೋಳಿಗಳ‌ ಸಹಿತ ಇಬ್ಬರನ್ನು ಬಂಧಿಸಿದ್ದಾರೆ.  ಕಯ್ಯಾರ್ ಕೊಕ್ಕಚಾಲು ನಿವಾಸಿ ಹರೀಶ(37), ಅಶ್ವಂತಕಟ್ಟೆ ಬಳಿಯ ಸೋಮಯ್ಯ(48) ಬಂಧಿತರು. ರಹಸ್ಯ‌ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಕೋಳಿ ಅಂಕದ 50 ಕ್ಕೂ ಹೆಚ್ಚು ಜನರಿದ್ದರೂ ಪೊಲೀಸರನ್ನು ಕಂಡ ಕೂಡಲೇ ಓಡಿ ಪರಾರಿಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು